TSK

TSK · ವಿಮೋಚನಕಾಂಡ 40:2

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

¶ ಈ ಗುಡಾರದ ಮೇಲೆ ಹೊದಿಸುವುದಕ್ಕಾಗಿ ಆಡಿನ ರೋಮದಿಂದ ಹನ್ನೊಂದು ಪರದೆಗಳನ್ನು ಮಾಡಿಸಬೇಕು.

ದೇವದರ್ಶನ ಗುಡಾರದಲ್ಲಿ ಆಜ್ಞಾಶಾಸನಗಳ ಮಂಜೂಷದ ಮುಂದಿರುವ ಪರದೆಯ ಹೊರಗೆ ಆರೋನನೂ, ಅವನ ಮಕ್ಕಳೂ ಅದನ್ನು ಸಾಯಂಕಾಲದಿಂದ ಉದಯದವರೆಗೆ ಯೆಹೋವನ ಸನ್ನಿಧಿಯಲ್ಲಿ ಆ ದೀಪವು ಉರಿಯುತ್ತಿರುವಂತೆ ಸರಿಪಡಿಸುತ್ತಿರಬೇಕು. ಇಸ್ರಾಯೇಲ್ಯರು ಅವರ ಸಂತತಿಯವರು ಈ ನಿಯಮವನ್ನು ತಲತಲಾಂತರದವರೆಗೆ ಶಾಶ್ವತವಾಗಿ ಅನುಸರಿಸಬೇಕು. ಅದು ಅವರಿಗೆ ನಿತ್ಯ ನಿಯಮವಾಗಿರಬೇಕು.

ಅವರು ಮಾಡಬೇಕಾದವುಗಳು ಯಾವುವೆಂದರೆ; ದೇವದರ್ಶನದ ಗುಡಾರ, ಅದರ ಮೇಲ್ಹೊದಿಕೆಗಳು, ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆಕಲ್ಲುಗಳು,

ದೇವದರ್ಶನ ಗುಡಾರದ ಬಾಗಿಲಿನ ಮುಂದೆ ಸರ್ವಾಂಗಹೋಮ ಯಜ್ಞವೇದಿಯನ್ನು ಇರಿಸಬೇಕು.

¶ ಇಸ್ರಾಯೇಲರು ಐಗುಪ್ತ ದೇಶದಿಂದ ಹೊರಟ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸೀನಾಯಿ ಅರಣ್ಯದಲ್ಲಿ ದೇವದರ್ಶನದ ಗುಡಾರದೊಳಗೆ ಯೆಹೋವನು ಮೋಶೆಯ ಸಂಗಡ ಹೀಗೆ ಮಾತನಾಡಿದನು,

¶ ಅವನು ತನ್ನ ಆಳ್ವಿಕೆಯ ಮೊದಲನೆಯ ವರ್ಷದ ಮೊದಲನೆಯ ತಿಂಗಳಲ್ಲಿ ಯೆಹೋವನ ಆಲಯದ ಬಾಗಿಲುಗಳನ್ನು ತೆರೆಯಿಸಿ ಅವುಗಳನ್ನು ಭದ್ರಪಡಿಸಿದನು.

¶ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ನೀವು ಪೂರ್ಣಾಂಗವಾದ ಹೋರಿಯನ್ನು ಆರಿಸಿಕೊಂಡು ಪವಿತ್ರಾಲಯವನ್ನು ಶುದ್ಧೀಕರಿಸಬೇಕು.