TSK

TSK · ಆದಿಕಾಂಡ 37:14

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ಸಾರಳು ಕಾನಾನ್ ದೇಶದಲ್ಲಿರುವ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಸತ್ತಳು. ಅಬ್ರಹಾಮನು ಬಂದು ಆಕೆಗಾಗಿ ಗೋಳಾಡಿ ಕಣ್ಣೀರು ಸುರಿಸಿದನು.

¶ ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಮಮ್ರೆಗೆ ಬಂದನು. ಮಮ್ರೆಯು ಹೆಬ್ರೋನೆಂಬ ಕಿರ್ಯತರ್ಬಕ್ಕೆ ಸೇರಿರುವುದು. ಅದು ಅಬ್ರಹಾಮ ಇಸಾಕರು ಪರದೇಶಸ್ಥರಾಗಿ ವಾಸವಾಗಿದ್ದ ಸ್ಥಳ.

ಅವನು ಅವರ ಯೋಗ ಕ್ಷೇಮವನ್ನು ವಿಚಾರಿಸಿ ಅವರಿಗೆ ಹೇಳಿದ್ದೇನೆಂದರೆ, “ನೀವು ಹೇಳಿದ, ಮುದುಕನಾಗಿರುವ ನಿಮ್ಮ ತಂದೆ ಕ್ಷೇಮವೋ? ಅವನು ಇನ್ನೂ ಬದುಕಿದ್ದಾನೋ?” ಎಂದು ಕೇಳಿದನು.

ಆಗ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬನನ್ನು ಆಶೀರ್ವದಿಸಿ, ಹೆಬ್ರೋನ್ ಬೆಟ್ಟವನ್ನು ಅವನಿಗೆ ಸ್ವತ್ತಾಗಿ ಕೊಟ್ಟನು.

¶ ಒಂದು ದಿನ ಇಷಯನು ತನ್ನ ಮಗನಾದ ದಾವೀದನಿಗೆ, “ಇಗೋ ಇಲ್ಲಿ ಮೂವತ್ತು ಸೇರು ಹುರಿದ ಧಾನ್ಯ, ಹತ್ತು ರೊಟ್ಟಿಗಳೂ ಇರುತ್ತವೆ. ಇವುಗಳನ್ನು ತೆಗೆದುಕೊಂಡು ಶೀಘ್ರವಾಗಿ ಪಾಳೆಯಕ್ಕೆ ಹೋಗಿ ನಿನ್ನ ಅಣ್ಣಂದಿರಿಗೆ ಕೊಡು.

ದಾವೀದನು ತಾನು ತಂದವುಗಳನ್ನು ಸಾಮಾನು ಕಾಯುವವನ ಬಳಿಯಲ್ಲಿಟ್ಟು ರಣರಂಗಕ್ಕೆ ಓಡಿಹೋಗಿ ತನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸುತ್ತಾ ಅವರೊಡನೆ ಮಾತನಾಡುತ್ತಿದ್ದನು.

ಈ ಇಬ್ಬರನ್ನೂ ಕೊಂದ ಪಾಪವು ಯೋವಾಬನ ತಲೆಯ ಮೇಲೆಯೂ ಅವನ ಸಂತಾನದವರ ತಲೆಯ ಮೇಲೆಯೂ ಇರಲಿ. ಆದರೆ ದಾವೀದನಿಗೂ ಅವನ ಸಿಂಹಾಸನ, ಕುಟುಂಬ, ಸಂತಾನದವರಿಗೂ ಯೆಹೋವನಿಂದ ನಿತ್ಯ ಸಮಾಧಾನ ದೊರಕಲಿ” ಎಂದನು.

ಯೆಹೋವನು ಡೊಂಕುದಾರಿ ಹಿಡಿದವರನ್ನು, ಪಾತಕಿಗಳು ಹೋಗುವ ಸ್ಥಳಕ್ಕೆ ನಡೆಸುವನು. ಇಸ್ರಾಯೇಲರಿಗೆ ಶುಭವುಂಟಾಗಲಿ.

‹“ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡಿದ್ದರೆ ಎಷ್ಟೋ ಒಳ್ಳೆಯದು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ.›