TSK

TSK · ಆದಿಕಾಂಡ 46:16

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ಲೇಯಳು, “ನನಗೆ ಶುಭವಾಯಿತೆಂದು” ಹೇಳಿ ಅದಕ್ಕೆ “ಗಾದ್” ಎಂದು ಹೆಸರಿಟ್ಟಳು.

ಗಾದನ ಮೇಲೆ ಸುಲಿಗೆ ಮಾಡುವವರು ಬೀಳಲು, ಇವನು ಅವರನ್ನು ಹಿಮ್ಮಟ್ಟಿಕೊಂಡು ಹೋಗುವನು.

¶ ಗಾದ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಲೆಕ್ಕಮಾಡಲ್ಪಟ್ಟರು.

ಒಜ್ನೀಯ ವಂಶಸ್ಥರಾದ ಒಜ್ನೀಯರು, ಏರೀಯ ವಂಶಸ್ಥರಾದ ಏರೀಯರು,

¶ ಗಾದ್ ಕುಲದವರ ವಿಷಯದಲ್ಲಿ, “ಗಾದ್ಯರ ಪ್ರದೇಶವನ್ನು ವಿಸ್ತಾರಮಾಡಿದ ಯೆಹೋವನಿಗೆ ಸ್ತೋತ್ರ. ಅವರು ಸಿಂಹದಂತೆ ಹೊಂಚಿಕೊಂಡು (ಶತ್ರುಗಳ) ಭುಜವನ್ನೂ ಅಥವಾ ಶಿರಸ್ಸನ್ನೂ ಮುರಿಯುತ್ತಾರೆ.

¶ ರೂಬೇನ್ಯರ ಎದುರಿನಲ್ಲಿ ಬಾಷಾನ್ ಸೀಮೆಯ ಸಲ್ಕದವರೆಗೂ ವಾಸಿಸುತ್ತಿದ್ದವರು ಗಾದ್ ಕುಲದವರು: