TSK

TSK · ಹೋಶೇ 2:10

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ಅತಿದುಷ್ಟಳಾದ ಅತಲ್ಯಳ ಮನೆಯವರು ದೇವಾಲಯವನ್ನು ಹಾಳುಮಾಡಿ, ಯೆಹೋವನ ಆಲಯದ ಪ್ರತಿಷ್ಠಿತ ವಸ್ತುಗಳನ್ನು ಬಾಳನಿಗಾಗಿ ಕೊಟ್ಟು ಬಿಟ್ಟಿದ್ದಾರಲ್ಲಾ?” ಎಂದು ಹೇಳಿದನು.

“ಇವು ನನಗೆ ಏಕೆ ಸಂಭವಿಸಿದವು” ಎಂದು ನೀನು ಮನದೊಳಗೆ ಅಂದುಕೊಂಡರೆ, ನಿನ್ನ ಉಡುಗೆಯು ಕೀಳಲ್ಪಟ್ಟು, ನಿನ್ನ ಹಿಮ್ಮಡಿಯು ನಾಚಿಕೆಗೆ ಈಡಾದುದ್ದಕ್ಕೆ ನಿನ್ನ ಮಹಾಪಾಪವೇ ಕಾರಣ ಎಂದು ನಿನಗೆ ಗೊತ್ತಾಗುವುದು.

ನೀನು ಪೂಜಾ ಸ್ಥಾನಗಳನ್ನು ಕಟ್ಟಿಕೊಂಡು ನಿನ್ನ ಚಿತ್ರವಿಚಿತ್ರ ವಸ್ತ್ರಗಳಿಂದ ಅವುಗಳನ್ನು ಅಲಂಕರಿಸಿ ಅಲ್ಲಿ ವ್ಯಭಿಚಾರ ನಡಿಸಿದೆ. ಇದು ನಡೆಯತಕ್ಕದ್ದಲ್ಲ. ಆಗಬಾರದಾಗಿತ್ತು.

ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ಮಿತಿಮೀರಿದ ನಿನ್ನ ಕಾಮಾತುರ, ನಿನ್ನಲ್ಲಿ ವ್ಯಭಿಚಾರಮಾಡಿದ ನಿನ್ನ ಪ್ರಿಯರ ಮೂಲಕ ನಿನಗಾದ ಮಾನಭಂಗ, ನಿನ್ನ ಎಲ್ಲಾ ಅಸಹ್ಯ ವಿಗ್ರಹಗಳು, ನೀನು ಅವುಗಳಿಗೆ ಅರ್ಪಿಸಿದ ನಿನ್ನ ಮಕ್ಕಳ ರಕ್ತ,

ಇಲ್ಲದಿದ್ದರೆ ನಾನು ಅವಳ ಬಟ್ಟೆಯನ್ನು ಕಿತ್ತು, ಅವಳನ್ನು ಹುಟ್ಟಿದಾಗ ಇದ್ದಂತೆ ಬೆತ್ತಲೆಯಾಗಿ ನಿಲ್ಲಿಸುವೆನು ಅವಳನ್ನು ಬೆಂಗಾಡಾಗಿಸಿ, ಮರುಭೂಮಿಯ ಸ್ಥಿತಿಗೆ ತಂದು, ನೀರಡಿಕೆಯಿಂದ ಸಾಯಿಸುವೆನು.

ಇಸ್ರಾಯೇಲ್ ಸೊಂಪಾಗಿ ಬೆಳೆದ ದ್ರಾಕ್ಷಾಲತೆಯಾಗಿದೆ; ಹಣ್ಣುಬಿಟ್ಟುಕೊಂಡಿದೆ; ಅದರ ಹಣ್ಣುಗಳು ಹೆಚ್ಚಿದಷ್ಟೂ ಯಜ್ಞವೇದಿಗಳನ್ನು ಹೆಚ್ಚಿಸಿಕೊಂಡಿದೆ; ಅದರ ಭೂಮಿಯು ಎಷ್ಟು ಒಳ್ಳೆಯದೋ, ಅಷ್ಟು ಒಳ್ಳೆಯ ವಿಗ್ರಹ ಸ್ತಂಭಗಳನ್ನು ನಿರ್ಮಾಣ ಮಾಡಿಕೊಂಡಿದೆ.

ಆದಕಾರಣ ನಾನು ಅವರ ಪಾಲಿಗೆ ಸಿಂಹ; ಚಿರತೆಯ ಹಾಗೆ ದಾರಿಯ ಮಗ್ಗುಲಲ್ಲಿ ಹೊಂಚುಹಾಕುವೆನು.

‹ಮರೆಯಾಗಿರುವಂಥದ್ದು ವ್ಯಕ್ತವಾಗುವುದು. ರಹಸ್ಯವಾಗಿರುವಂಥದ್ದು ಪ್ರಕಟವಾಗುವುದು.›