TSK

TSK · ಅರಣ್ಯಕಾಂಡ 4:49

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

¶ ಆದರೆ ಅವರೊಡನೆ ಲೇವಿ ಕುಲದ ಕುಟುಂಬಗಳು ಲೆಕ್ಕಿಸಲ್ಪಡಲಿಲ್ಲ.

ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಲೇವಿಯರು ಇಸ್ರಾಯೇಲರ ಸಂಗಡ ಲೆಕ್ಕಹಾಕಲಿಲ್ಲ.

ದಂಡು ಹೊರಡುವಾಗ ಆರೋನನೂ ಮತ್ತು ಅವನ ಮಕ್ಕಳೂ ದೇವಸ್ಥಾನದ ಎಲ್ಲಾ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದ ನಂತರ ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು, ಮುಟ್ಟಿದರೆ ಸತ್ತು ಹೋಗುವರು. ದೇವದರ್ಶನದ ಗುಡಾರದ ಸಾಮಾನುಗಳಲ್ಲಿ ಕೆಹಾತ್ಯರು ಹೊರಬೇಕಾದವುಗಳು ಇವೇ.

ಸೇವಾಕಾರ್ಯ ಮಾಡುವುದರಲ್ಲಿಯೂ, ಹೊರೆಗಳನ್ನು ಹೊರುವುದರಲ್ಲಿಯೂ ಗೇರ್ಷೋನ್ಯರ ಗೋತ್ರಕುಟುಂಬದವರು ಮಾಡಬೇಕಾದ ಸೇವೆ ಯಾವುದೆಂದರೆ;

ಅಂಗಳದ ಕಂಬಗಳನ್ನು, ಇವುಗಳ ಗದ್ದಿಗೆಕಲ್ಲುಗಳನ್ನೂ, ಗೂಟಗಳನ್ನೂ, ಹಗ್ಗಗಳನ್ನೂ ಎಲ್ಲಾ ಉಪಕರಣಗಳನ್ನೂ ಹೊರಬೇಕು; ಇವುಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಅವರು ಮಾಡಬೇಕು. ಅವರವರ ಜವಾಬ್ದಾರಿಗಳನ್ನೆಲ್ಲಾ ನೀವು ಹೆಸರು ಹೇಳಿ ಗೊತ್ತುಮಾಡಬೇಕು.

ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಮತ್ತು ಆರೋನರು ಗೇರ್ಷೋನ್ಯರ ಗೋತ್ರಕುಟುಂಬದವರನು ಎಣಿಕೆಮಾಡಿದಾಗ ಅವರಲ್ಲಿ ದೇವದರ್ಶನದ ಗುಡಾರದ ಕೆಲಸವನ್ನು ಮಾಡತಕ್ಕವರು ಇಷ್ಟೇ ಜನರು.

¶ ಆ ಅಂಕುರದ ಮೇಲೆ ಜ್ಞಾನ ವಿವೇಕದಾಯಕ ಆತ್ಮ, ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳಿವಳಿಕೆಯನ್ನೂ ಮತ್ತು ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವುದು.

ದ್ವೀಪನಿವಾಸಿಗಳೇ, ನನ್ನ ಕಡೆಗೆ ಕಿವಿಗೊಡಿರಿ, ದೂರದ ಜನಾಂಗಗಳೇ, ಆಲಿಸಿರಿ! ನಾನು ಗರ್ಭದಲ್ಲಿದ್ದಾಗಲೇ ಯೆಹೋವನು ನನ್ನನ್ನು ಕರೆದನು, ತಾಯಿಯ ಉದರದಲ್ಲಿದ್ದಂದಿನಿಂದಲೂ ನನ್ನ ಹೆಸರನ್ನು ಹೇಳುತ್ತಿದ್ದಾನೆ.