TSK

TSK · ಅಪೊಸ್ತಲರ ಕೃತ್ಯಗ 4:21

Treasury of Scripture Knowledge references in Kannada KJV.

ಅಂಗೀಕಾರಕ್ಕೆ ಹಿಂತಿರುಗಿ

ಮತ್ತು ದೆವ್ವವು ಹೊರಗೆ ಹಾಕಲ್ಪಟ್ಟ ಮೇಲೆ ಮೂಕನು ಮಾತಾಡಿದನು; ಆಗ ಜನಸಮೂಹಗಳವರು ಬೆರ ಗಾಗಿ--ಇಂಥದ್ದು ಎಂದೂ ಇಸ್ರಾಯೇಲಿನಲ್ಲಿ ಕಂಡಿಲ್ಲ ಎಂದು ಹೇಳಿದರು.

ಆದರೆ ಅವರು ಆತನನ್ನು ಹಿಡಿಯುವದಕ್ಕೆ ಪ್ರಯತ್ನಿಸಿದಾಗ ಜನಸಮೂಹಕ್ಕೆ ಭಯಪಟ್ಟರು; ಯಾಕಂದರೆ ಅವರು ಆತನನ್ನು ಪ್ರವಾದಿಯೆಂದು ಎಣಿಸಿದ್ದರು.

ಅಲ್ಲಿದ್ದವ ರೆಲ್ಲರೂ ವಿಸ್ಮಯಗೊಂಡು ದೇವರನ್ನು ಮಹಿಮೆ ಪಡಿಸಿದರು. ಮತ್ತು ಅವರು ಭಯದಿಂದ ಕೂಡಿದ ವರಾಗಿ--ನಾವು ಈ ದಿನ ಅಪೂರ್ವವಾದವುಗಳನ್ನು ನೋಡಿದ್ದೇವೆ ಅಂದರು.

ಇದಲ್ಲದೆ ಆತನು ಪ್ರತಿದಿನವೂ ದೇವಾಲಯ ದಲ್ಲಿ ಬೋಧಿಸುತ್ತಿದ್ದನು. ಆದರೆ ಪ್ರಧಾನಯಾಜಕರೂ ಶಾಸ್ತ್ರಿಗಳೂ ಜನರ ಪ್ರಮುಖರೂ ಆತನನ್ನು ಕೊಲ್ಲು ವದಕ್ಕೆ ಹವಣಿಸುತ್ತಿದ್ದರು.

ಅದೇ ಗಳಿಗೆಯಲ್ಲಿ ಪ್ರಧಾನಯಾಜಕರೂ ಶಾಸ್ತ್ರಿಗಳೂ ಆತನ ಮೇಲೆ ಕೈ ಹಾಕುವದಕ್ಕೆ ಹವಣಿ ಸಿದರು; ಯಾಕಂದರೆ ಅತನು ತಮಗೆ ವಿರೋಧ ವಾಗಿಯೇ ಈ ಸಾಮ್ಯವನ್ನು ಹೇಳಿದ್ದನೆಂದು ಅವರು ತಿಳಿದುಕೊಂಡಿದ್ದರು; ಆದರೆ ಅವರು ಜನರಿಗೆ ಭಯಪಟ್ಟರು.

ಆತನು ಈ ಅದ್ಭುತಕಾರ್ಯವನ್ನು ಮಾಡಿದನೆಂದು ಕೇಳಿದ ಜನರು ಸಹ ಆತನನ್ನು ಎದುರುಗೊಂಡರು.

ಆದರೆ ಇದು ಜನ ರಲ್ಲಿ ಇನ್ನೂ ಹಬ್ಬದಂತೆ ಇಂದಿನಿಂದ ಅವರು ಯಾವ ಮನುಷ್ಯನ ಸಂಗಡ ಈ ಹೆಸರಿನಲ್ಲಿ ಮಾತನಾಡ ಬಾರದೆಂದು ನಾವು ಖಂಡಿತವಾಗಿ ಅವರನ್ನು ಗದರಿ ಸೋಣ ಎಂದು ಅಂದುಕೊಂಡು

ಇದಕ್ಕೆ ಅವರು ಅವನೊಂದಿಗೆ ಒಪ್ಪಿಕೊಂಡು ಅಪೊಸ್ತಲರನ್ನು ಕರೆಯಿಸಿ ಅವರನ್ನು ಹೊಡೆದು ಯೇಸುವಿನ ಹೆಸರಿನಲ್ಲಿ ಮಾತನಾಡಬಾರದೆಂದು ಅಪ್ಪಣೆ ಕೊಟ್ಟು ಬಿಟ್ಟುಬಿಟ್ಟರು.