ಇದಾದ ಮೇಲೆ ಅವರು ಪೂರ್ವ ದಿಕ್ಕಿನಿಂದ ಹೊರಟು ಪ್ರಯಾಣ ಮಾಡುವಾಗ ಶಿನಾರ್ ದೇಶದ ಬೈಲನ್ನು ಕಂಡುಕೊಂಡು ಅಲ್ಲಿ ವಾಸಮಾಡಿದರು.
TSK
TSK · ದಾನಿಯೇಲನು 1:2
Treasury of Scripture Knowledge references in Kannada KJV.
ಅವರ ಬಂಡೆ ಅವರನ್ನು ಮಾರಿ ಕರ್ತನು ಅವರನ್ನು ಅಟ್ಟಿಬಿಟ್ಟರೆ ಒಬ್ಬನು ಹೇಗೆ ಸಾವಿರ ಮಂದಿ ಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?
ಆದದರಿಂದ ಕರ್ತನು ಇಸ್ರಾಯೇಲ್ಯರ ಮೇಲೆ ಕೋಪಗೊಂಡು ಅವರನ್ನು ಮೆಸೊಪೋತಾಮ್ಯದ ಅರಸನಾದ ಕೂಷನ್ ರಿಷಾತಯಿಮ್ ಕೈಗೆ ಮಾರಿಬಿಟ್ಟನು. ಇಸ್ರಾಯೇಲ್ ಮಕ್ಕಳು ಕೂಷನ್‌ರಿಷಾತಯಿಮ್‌ನ್ನು ಎಂಟು ವರುಷ ಸೇವಿಸಿದರು.
ಫಿಲಿಷ್ಟಿಯರ ಅಧಿಪತಿಗಳು ತಮ್ಮ ದೇವರಾದ ದಾಗೋನನಿಗೆ ದೊಡ್ಡ ಬಲಿಯನ್ನು ಅರ್ಪಿಸುವದಕ್ಕೂ ಸಂತೋಷಪಡುವದಕ್ಕೂ ಕೂಡಿಬಂದರು. ಯಾಕಂದರೆ--ನಮ್ಮ ದೇವರು ನಮ್ಮ ಶತ್ರುವಾದ ಸಂಸೋನನನ್ನು ನಮ್ಮ ಕೈಗೆ ಒಪ್ಪಿಸಿಕೊಟ್ಟನು ಎಂದು ಅವರು ಹೇಳಿಕೊಂಡರು.
ಅವನ ತಲೆಯನ್ನು ಕಡಿದು ಅವನ ಆಯುಧಗಳನ್ನು ಬಿಚ್ಚಿ ತಕ್ಕೊಂಡು ತಮ್ಮ ವಿಗ್ರಹಗಳ ಗುಡಿಗಳಲ್ಲಿಯೂ ಜನರಲ್ಲಿಯೂ ಸಾರುವದಕ್ಕೆ ಫಿಲಿಷ್ಟಿ ಯರ ದೇಶದ ಸುತ್ತಲೂ ಕಳುಹಿಸಿದರು.
ಇದಲ್ಲದೆ ನೆಬೂಕದ್ನೆಚ್ಚರನು ಕರ್ತನ ಮನೆಯ ಪಾತ್ರೆಗಳಲ್ಲಿ ಕೆಲವನ್ನು ಬಾಬೆಲಿಗೆ ತಕ್ಕೊಂಡು ಹೋಗಿ ಬಾಬೆಲಿ ನಲ್ಲಿರುವ ತನ್ನ ಮಂದಿರದಲ್ಲಿ ಇರಿಸಿದನು.
ಅವರನ್ನು ಅನ್ಯಜನಾಂಗಗಳ ಕೈಗೆಕೊಟ್ಟನು; ಅವರ ಹಗೆಯವರು ಅವರನ್ನು ಆಳಿದರು.
ಯಾಕೋಬನ್ನು ಸುಲಿಗೆಗೂ ಇಸ್ರಾಯೇಲನ್ನು ಕೊಳ್ಳೆಗೂ ಗುರಿಮಾಡಿ ದವನು ಯಾರು? ನಾವು ಯಾರಿಗೆ ವಿರೋಧವಾಗಿ ಪಾಪವನ್ನು ಮಾಡಿದೆವು, ಅದು ಕರ್ತನಿಗಲ್ಲವೇ? ಅವರು ಆತನ ಮಾರ್ಗದಲ್ಲಿ ನಡೆಯದೆ ಇಲ್ಲವೆ ಆತನ ನ್ಯಾಯಪ್ರಮಾಣಕ್ಕೆ ಅವಿಧೇಯರಾದರಲ್ಲಾ.
ನಾನು ಬಾಬೆಲಿನಲ್ಲಿರುವ ಬೇಲ್‌ನನ್ನು ದಂಡಿಸಿ ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ತರಿಸುವೆನು; ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವದಿಲ್ಲ; ಹೌದು, ಬಾಬೆಲಿನ ಗೋಡೆ ಬೀಳುವದು.
ಆ ದ್ರಾಕ್ಷಾರಸವನ್ನು ರುಚಿಸುತ್ತಿರುವಾಗ ಬೆಲ್ಯಚ್ಚರನು ತನ್ನ ತಂದೆಯಾದ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯ ದೊಳಗಿಂದ ತಂದ ಬೆಳ್ಳಿಬಂಗಾರಗಳ ಪಾತ್ರೆಗಳಲ್ಲಿ ಅರಸನೂ ಅವನ ಪ್ರಭುಗಳೂ ಅವನ ಪತ್ನಿ ಮತ್ತು ಉಪಪತ್ನಿಯರು ಅವುಗಳಲ್ಲಿ ಕುಡಿಯುವ ಹಾಗೆ ತರಲು ಆಜ್ಞಾಪಿಸಿದನು.
ತಮ್ಮ ಬಲೆಗೆ ಬಲಿ ಅರ್ಪಿಸಿ ತಮ್ಮ ಜಾಲಕ್ಕೆ ಧೂಪವನ್ನು ಸುಡುತ್ತಾರೆ; ಇವುಗಳಿಂದ ಅವರ ಪಾಲು ಕೊಬ್ಬಾಗಿಯೂ ಅವರ ಆಹಾರ ಪುಷ್ಟಿ ಯುಳ್ಳದ್ದಾಗಿಯೂ ಇದೆ.