ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಆತನು ಗೌರವಿಸಲಿಲ್ಲ. ಆಗ ಕಾಯಿ ನನು ಬಹು ಕೋಪಗೊಂಡನು, ಅವನ ಮುಖವು ಕಳೆಗುಂದಿತು.
TSK
TSK · ಙ್ಞಾನೋಕ್ತಿಗಳು 19:3
Treasury of Scripture Knowledge references in Kannada KJV.
ಆಗ ಇಸ್ರಾಯೇಲ್ ಮಕ್ಕಳು ಮೋಶೆಯ ಸಂಗಡ ಮಾತನಾಡಿ--ಇಗೋ, ಸಾಯುತ್ತೇವೆ. ನಾಶವಾಗು ತ್ತೇವೆ: ನಾವೆಲ್ಲರೂ ನಾಶವಾಗುತ್ತೇವೆ.
ಎದುರು ಬೀಳುವದು ಕಣಿ ಹೇಳುವಂತೆ ಪಾಪ ವಾಗಿದೆ, ಹಟವು ದುಷ್ಟತನ ಮತ್ತು ವಿಗ್ರಹಾರಾಧನೆಗಳ ಹಾಗೆ ಇದೆ. ನೀನು ಕರ್ತನ ವಾಕ್ಯವನ್ನು ತಿರಸ್ಕಾರ ಮಾಡಿದ್ದರಿಂದ ಆತನು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕಾರ ಮಾಡಿಬಿಟ್ಟನು ಅಂದನು.
ಇವನು ಅವನಿಗೆ--ಕರ್ತನು ಹೇಳುವ ದೇನಂದರೆ--ನಾನು ಪೂರ್ಣನಾಶಕ್ಕೆ ಒಪ್ಪಿಸಿದ ಮನು ಷ್ಯನನ್ನು ನೀನು ಕೈಬಿಟ್ಟು ಹೋಗಗೊಡಿಸಿದ ಕಾರಣ ಅವನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವೂ ಅವನ ಜನಕ್ಕೆ ಬದಲಾಗಿ ನಿನ್ನ ಜನವೂ ಹೋಗುವದು ಅಂದನು.
ಅವನು ಅವರ ಸಂಗಡ ಇನ್ನೂ ಮಾತನಾಡುತ್ತಿರುವಾಗ ಇಗೋ, ಆ ಸೇವಕನು ತನ್ನ ಬಳಿಗೆ ಬಂದು--ಇಗೋ, ಈ ಕೇಡು ಕರ್ತನಿಂದ ಉಂಟಾಯಿತು; ನಾನು ಇನ್ನೂ ಕರ್ತನನ್ನು ನಿರೀಕ್ಷಿಸುವದೇನು ಅಂದನು.
ದೇವರಿಗೆ ವಿರೋಧವಾಗಿ ನಿನ್ನ ಆತ್ಮವನ್ನು ತಿರುಗಿಸಿ ನಿನ್ನ ಬಾಯೊಳಗಿಂದ ಮಾತುಗಳನ್ನು ಹೊರಡಿಸುತ್ತೀ ಯಲ್ಲಾ.
ಕರ್ತನಲ್ಲಿ ಶಾಂತವಾಗಿರು; ಮೌನವಾಗಿದ್ದು ಆತನಿಗಾಗಿ ಎದುರುನೋಡು; ತನ್ನ ಮಾರ್ಗದಲ್ಲಿ ಸಫಲ ವಾಗುವವನಿಗೋಸ್ಕರವೂ ಯುಕ್ತಿಗಳನ್ನು ನಡಿಸುವ ಮನುಷ್ಯರಿಗೋಸ್ಕರವೂ ಕೋಪಮಾಡಿಕೊಳ್ಳಬೇಡ.
ಅವರು ಘೋರ ಕಷ್ಟಕ್ಕೊಳಗಾಗಿ ಹಸಿದು ದೇಶದಲ್ಲಿ ಅಲೆಯು ವರು; ಅವರು ಹಸಿದಾಗ ರೇಗಿಕೊಂಡು ತಮ್ಮ ರಾಜ ನನ್ನೂ ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು.
ಆದರೆ ನೀವು, ಕರ್ತನ ಮಾರ್ಗವು ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾ ಯೇಲಿನ ಮನೆಯವರೇ, ಈಗ ಕೇಳಿರಿ, ನನ್ನ ಮಾರ್ಗವು ಸಮವಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವು ಗಳೇ.
ಮನುಷ್ಯರು ಬಲವಾದ ಕಾವಿನಿಂದ ಕಂದಿಹೋದರೂ ಅವರು ದೇವರನ್ನು ಘನಪಡಿಸುವ ಹಾಗೆ ಮಾನಸಾಂತರ ಮಾಡಿಕೊಳ್ಳದೆ ಈ ಉಪದ್ರವ ಗಳ ಮೇಲೆ ಅಧಿಕಾರವುಳ್ಳ ದೇವರ ನಾಮವನ್ನು ದೂಷಿಸಿದರು.