ಯೆಹೋವನು ಬಿಳಾಮನಿಗೆ ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಹಿಂತಿರುಗಿ ಹೋಗಿ ಹೀಗೆ ಹೇಳಬೇಕು” ಎಂದು ಆಜ್ಞಾಪಿಸಿದನು.
TSK
TSK · ಅರಣ್ಯಕಾಂಡ 22:20
مراجع Treasury of Scripture Knowledge في ಕನ್ನಡ IRV.
¶ ಯೆಹೋವನು ಬಿಳಾಮನಿಗೆ ಎದುರಾಗಿ ಬಂದು ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟನು. ಆಗ ಅವನು ಹೇಳಿದ್ದೇನೆಂದರೆ, “ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ಹೀಗೆ ಹೇಳಬೇಕು” ಎಂದನು.
‘ಬಾಲಾಕನು ನನಗೆ ತನ್ನ ಮನೇ ತುಂಬುವಷ್ಟು ಬೆಳ್ಳಿಬಂಗಾರವನ್ನು ದಾನಮಾಡಿದರೂ ನಾನು ಯೆಹೋವನ ಆಜ್ಞೆಯನ್ನು ಮೀರಿ ನನ್ನ ಇಷ್ಟದಂತೆ ಒಳ್ಳೇಯದನ್ನಾದರೂ, ಕೆಟ್ಟದ್ದನ್ನಾದರೂ ಮಾಡಲಾರೆ. ಯೆಹೋವನು ಏನು ಹೇಳುತ್ತಾನೋ ಅದನ್ನೇ ಮಾತನಾಡುವೆನು ಎಂದು ಹೇಳಲಿಲ್ಲವೋ?’
ಅಮ್ಮೋನಿಯರ ಅರಸನಾದ ನಾಹಾಷನು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತಾನೆಂದು ನಿಮಗೆ ಗೊತ್ತಾಗಲು, ನಿಮ್ಮ ದೇವರಾದ ಯೆಹೋವನು ನಿಮ್ಮ ಅರಸನಾಗಿದ್ದರೂ ನೀವು, ‘ನಮಗೊಬ್ಬ ಅರಸನನ್ನು ನೇಮಿಸು’ ಎಂದು ನನ್ನನ್ನು ಬೇಡಿಕೊಂಡಿರಿ.
ಅವರ ಇಷ್ಟಭೋಜನವು ಅವರಿಗೆ ಅಸಹ್ಯವಾಗುವುದಕ್ಕಿಂತ ಮೊದಲು, ಅವರು ಅದನ್ನು ಇನ್ನೂ ಸೇವಿಸುತ್ತಿರುವಾಗಲೇ,
ಏಕೆಂದರೆ ನೀನು ನನ್ನ ವಿರುದ್ಧ ಕೋಪಗೊಂಡಿರುವುದೂ, ಅಸಮಾಧಾನವಾಗಿರುವುದೂ ನನಗೆ ತಿಳಿದುಬಂತು. ಆದುದರಿಂದ ನಿನಗೆ ಮೂಗುದಾರವನ್ನೂ, ಕಡಿವಾಣವನ್ನೂ ಹಾಕಿ ಬಂದ ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು” ಎಂಬುದಾಗಿ ಹೇಳಿದ್ದಾನೆ.
ನಾನು ಕೋಪಗೊಂಡು ರಾಜರನ್ನು ಕೊಟ್ಟಿದ್ದೇನೆ; ಕೋಪೋದ್ರೇಕನಾಗಿ ಅವರನ್ನು ತೆಗೆದು ಹಾಕಿದ್ದೇನೆ.