ಜನಾಂಗವು ಜನಾಂಗದಿಂದಲೂ ಪಟ್ಟಣವು ಪಟ್ಟಣದಿಂದಲೂ ನಾಶವಾಯಿತು. ಯಾಕಂದರೆ ದೇವರು ಸಕಲ ಇಕ್ಕಟ್ಟುಗಳಿಂದ ಅವ ರನ್ನು ತೊಂದರೆಪಡಿಸಿದನು.
TSK
TSK · ಮಾರ್ಕನು 13:8
مراجع Treasury of Scripture Knowledge في Kannada KJV.
ಇದಲ್ಲದೆ ನಾನು ಐಗುಪ್ತಕ್ಕೆ ವಿರೋಧವಾಗಿ ಐಗುಪ್ತ ವನ್ನು ಎಬ್ಬಿಸುವೆನು; ಸಹೋದರನಿಗೆ ವಿರೋದವಾಗಿ ಸಹೋದರನೂ ನೆರೆಯವನಿಗೆ ವಿರೋದವಾಗಿ ನೆರೆ ಯವನೂ ಪಟ್ಟಣಕ್ಕೆ ವಿರೋಧವಾಗಿ ಪಟ್ಟಣವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಹೋರಾಡುವವು.
ಪ್ರಸವವೇದನೆ ಪಡುವವಳ ಸ್ವರಕ್ಕೂ ಚೊಚ್ಚಲನ್ನು ಹೆರುವವಳ ಸಂಕಟಕ್ಕೂ ಸಮಾನವಾಗಿ ರುವ ಚೀಯೋನಿನ ಮಗಳ ಸ್ವರವನ್ನು ಕೇಳಿದ್ದೇನೆ; ಆಕೆಯು ಗೋಳಾಡುತ್ತಾಳೆ, ಕೈಗಳನ್ನು ಚಾಚಿ--ನನಗೀಗ ಅಯ್ಯೋ, ಕೊಲೆಗಾರರ ನಿಮಿತ್ತ ನನ್ನ ಪ್ರಾಣವು ಬೇಸರಗೊಳ್ಳುತ್ತದೆ ಎಂದನ್ನುತ್ತಾಳೆ.
ಆತನು ನಿನ್ನನ್ನು ಶಿಕ್ಷಿಸುವಾಗ ಏನು ಹೇಳುವಿ? ನಿನ್ನ ಮೇಲೆ ಅವರು ಮುಖ್ಯ ಪ್ರಭುಗಳೂ ಮುಖ್ಯಸ್ಥರೂ ಆಗಿರುವದಕ್ಕೆ ನೀನೇ ಅವರಿಗೆ ಕಲಿಸಿದಿಯಲ್ಲಾ? ಹೆರುವ ಸ್ತ್ರೀಯ ಪ್ರಕಾರ ನಿನ್ನನ್ನು ದುಃಖಗಳು ಹಿಡಿಯುವವಲ್ಲವೋ?
ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಜನಾಂಗದಿಂದ ಜನಾಂಗಕ್ಕೆ ಕೇಡು ಹೊರಡುವದು; ಭೂಮಿಯ ಮೇರೆಗಳಿಂದ ಮಹಾಬಿರುಗಾಳಿ ಎಬ್ಬಿಸ ಲ್ಪಡುವದು.
ಬಾಬೆಲಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ. ಅವನ ಕೈಗಳು ನಿತ್ರಾಣವಾದವು. ಸಂಕಟವೂ ಹೆರುವ ಸ್ತ್ರೀಯ ಹಾಗೆ ನೋವೂ ಅವನನ್ನು ಹಿಡಿದವು.
ರಾಜ್ಯಗಳ ಸಿಂಹಾಸನವನ್ನು ಕೆಡವಿಹಾಕುವೆನು; ಅನ್ಯ ಜನಾಂಗಗಳ ರಾಜ್ಯಗಳ ಬಲವನ್ನು ನಾಶಮಾಡುವೆನು, ರಥಗಳನ್ನೂ ಅವುಗಳಲ್ಲಿ ಸವಾರಿ ಮಾಡುವವರನ್ನೂ ಕೆಡವಿಹಾಕುವೆನು; ಕುದುರೆಗಳೂ ಅದರ ಸವಾರರೂ ಪ್ರತಿಯೊಬ್ಬನೂ ತನ್ನ ಸಹೋದರನ ಕತ್ತಿಯಿಂದ ಬೀಳು ವನು.
ಇವೆಲ್ಲವುಗಳು ಸಂಕಟಗಳ ಆರಂಭವು.
ಆದರೆ--ಸಮಾಧಾನವಾಗಿಯೂ ಸುರಕ್ಷಿತವಾಗಿಯೂ ಇರುತ್ತೇ ವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.