TSK

TSK · ಅರಣ್ಯಕಾಂಡ 13:21

مراجع Treasury of Scripture Knowledge في Kannada KJV.

العودة إلى المقطع

ನೀವು ಜಿನ್‌ ಎಂಬ ಮರುಭೂಮಿಯ ಲ್ಲಿಯೂ ಸಭೆಯ ವಾಗ್ವಾದದಲ್ಲಿಯೂ ಅವರಿಗೆದು ರಾಗಿ ನೀರಿನ ಬಳಿಯಲ್ಲಿ ನನ್ನನ್ನು ಪರಿಶುದ್ಧ ಮಾಡದೆ ನನ್ನ ಆಜ್ಞೆಯನ್ನು ವಿಾರಿದಿರಿ. ಆ ನೀರು ಅಂದರೆ ಜಿನ್‌ ಎಂಬ ಅರಣ್ಯದ ಕಾದೇಶಿನಲ್ಲಿರುವ ಮೆರೀಬಾದ ನೀರು ಅಂದನು.

ಹೇಗೆ ಅಂದರೆ ನಿಮ್ಮ ದಕ್ಷಿಣ ಕಡೆಯು ಜಿನ್‌ ಅರಣ್ಯದಿಂದ ಎದೋಮಿಗೆ ಅನುಸಾರವಾಗಿರಬೇಕು; ನಿಮ್ಮ ದಕ್ಷಿಣ ಮೇರೆಯು ಉಪ್ಪಿನ ಸಮುದ್ರದ ಪೂರ್ವದ ಕಡೆಯಿಂದ ಆರಂಭಿಸಬೇಕು.

ಕಾರಣವೇನಂದರೆ, ನೀವು ಜಿನ್‌ ಅರಣ್ಯದಲ್ಲಿ ಕಾದೇಶಿನ ಮೆರೀಬಾದ ನೀರಿನ ಬಳಿಯಲ್ಲಿ ನನ್ನನ್ನು ಇಸ್ರಾಯೇಲ್‌ ಮಕ್ಕಳಲ್ಲಿ ಪರಿಶುದ್ಧ ಮಾಡದೆ ನನಗೆ ವಿರೋಧವಾಗಿ ಆಜ್ಞೆ ವಿಾರಿದಿರಿ.

ಇದಲ್ಲದೆ ಯೂದನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ವಿಭಾಗಿಸಿದ ಮೇರೆ ಯಾವದಂದರೆ, ಕಟ್ಟ ಕಡೆಗಿರುವ ದಕ್ಷಿಣ ಕಡೆಗೆ ಎದೋಮಿನ ಮೇರೆಯಾದ ಜಿನ್‌ ಅರಣ್ಯದ ದಕ್ಷಿಣ ಭಾಗವಾಗಿದೆ.

ದಾವೀದನು ಹದದೆಜೆರನ ಎಲ್ಲಾ ಸೈನ್ಯವನ್ನು ಹೊಡೆದನೆಂದು ಹಮಾತಿನ ಅರಸನಾದ ತೋವು ಕೇಳಿದಾಗ