TSK

TSK · ಙ್ಞಾನೋಕ್ತಿಗಳು 16:1

مراجع Treasury of Scripture Knowledge في Kannada KJV.

العودة إلى المقطع

ಅದಕ್ಕೆ ಕರ್ತನು ಅವನಿಗೆ--ಮನುಷ್ಯನಿಗೆ ಬಾಯಿ ಕೊಟ್ಟಾತನೂ ಮೂಕರನ್ನೂ ಕಿವುಡರನ್ನೂ ದೃಷ್ಟಿಯುಳ್ಳವರನ್ನೂ ಕುರುಡರನ್ನೂ ಉಂಟುಮಾಡಿ ದಾತನೂ ಯಾರು? ಕರ್ತನಾದ ನಾನೇ ಅಲ್ಲವೋ?

ನೀನು ಹೋಗಿ ನನ್ನ ಸೇವಕನಾದ ದಾವೀದನಿಗೆ--ಕರ್ತನು ಹೇಳಬೇಕಾದ ದ್ದೇನಂದರೆ--ನಾನು ವಾಸವಾಗಿರುವದಕ್ಕೆ ನೀನು ನನಗೆ ಮನೆಯನ್ನು ಕಟ್ಟುವಿಯೋ?

ಆಗ ಎಜ್ರನು -- ಯೆರೂಸಲೇಮಿನಲ್ಲಿರುವ ಕರ್ತನ ಆಲಯವನ್ನು ಅಲಂಕರಿಸುವದಕ್ಕೆ ಅರ ಸನ ಹೃದಯದಲ್ಲಿ ಇಂಥಾದ್ದನ್ನು ಇಟ್ಟು ಅರಸನ ಮುಂದೆಯೂ ಅವನ ಸಲಹೆಗಾರರ ಮುಂದೆಯೂ ಅರಸನ ಪರಾಕ್ರಮವುಳ್ಳ ಪ್ರಧಾನರ ಮುಂದೆಯೂ ನನಗೆ ಕೃಪೆ ಮಾಡಿದ ನಮ್ಮ ತಂದೆಗಳ ದೇವರಾಗಿ ರುವ ಕರ್ತನು ಸ್ತುತಿಸಲ್ಪಡಲಿ.

ನನ್ನ ದಿವಸಗಳು ಹಾದು ಹೋದವು: ನನ್ನ ಹೃದ ಯಕ್ಕೆ ಸ್ವಂತವಾಗಿರುವ ನನ್ನ ಉದ್ದೇಶಗಳು ಭಂಗವಾ ದವು.

ಲೋಭದ ಕಡೆಗಲ್ಲ, ನಿನ್ನ ಸಾಕ್ಷಿಗಳ ಕಡೆಗೆ ನನ್ನ ಹೃದಯವನ್ನು ತಿರುಗಿಸು.

ಮನುಷ್ಯನ ಹೃದಯದಲ್ಲಿ ಅನೇಕ ಕಲ್ಪನೆಗಳಿವೆ; ಆದರೂ ಕರ್ತನ ಸಂಕಲ್ಪವೇ ಈಡೇರು ವದು.

ನೀರಿನ ನದಿಗಳಂತೆ ಅರಸನ ಹೃದಯವು ಕರ್ತನ ಕೈಯಲ್ಲಿದೆ; ತನಗೆ ಇಷ್ಟವಾದ ಕಡೆಗೆ ಆತನು ಅದನ್ನು ತಿರುಗಿಸುತ್ತಾನೆ.

ಕರ್ತನೇ, ಮನುಷ್ಯನ ಮಾರ್ಗವು ತನ್ನಲ್ಲಿಲ್ಲವೆಂದೂ ತನ್ನ ಹೆಜ್ಜೆ ನೆಟ್ಟಗೆ ಮಾಡುವದು ನಡೆಯುವ ಮನುಷ್ಯನದಲ್ಲವೆಂದೂ ಬಲ್ಲೆನು.

ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.

ಅವರು ನಿಮ್ಮನ್ನು ಸಭಾ ಮಂದಿರಗಳಿಗೂ ನ್ಯಾಯಾಧಿಪತಿಗಳ ಮುಂದೆಯೂ ಅಧಿಕಾರಿಗಳ ಮುಂದೆಯೂ ತಂದಾಗ ಹೇಗೆ ಇಲ್ಲವೆ ಯಾವದನ್ನು ಉತ್ತರಕೊಡಬೇಕೆಂದು ಇಲ್ಲವೆ ಏನು ಹೇಳಬೇಕೆಂದು ಯೋಚಿಸಬೇಡಿರಿ.

ಆದರೆ ನಿಮ್ಮ ವಿಷಯವಾಗಿ ಅದೇ ಹಿತಚಿಂತನೆ ಯನ್ನು ದೇವರು ತೀತನ ಹೃದಯದಲ್ಲಿ ಹುಟ್ಟಿಸಿದ್ದಕ್ಕಾಗಿ ದೇವರಿಗೆ ಸ್ತೋತ್ರವಾಗಲಿ.