ಅರಣ್ಯಕಾಂಡ 26:55
TSK
ಇದಲ್ಲದೆ ಚೀಟು ಹಾಕುವದರಿಂದ ದೇಶವನ್ನು ಪಾಲು ಮಾಡಬೇಕು; ತಮ್ಮ ತಂದೆಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ಸ್ವತಂತ್ರಿಸಿಕೊಳ್ಳಬೇಕು.
TSK
مراجع Treasury of Scripture Knowledge في Kannada KJV.
ಇದಲ್ಲದೆ ಚೀಟು ಹಾಕುವದರಿಂದ ದೇಶವನ್ನು ಪಾಲು ಮಾಡಬೇಕು; ತಮ್ಮ ತಂದೆಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ಸ್ವತಂತ್ರಿಸಿಕೊಳ್ಳಬೇಕು.
ಅದನ್ನು ಅವರು ಏಳು ಪಾಲಾಗಿ ಹಂಚಬೇಕು. ದಕ್ಷಿಣದಲ್ಲಿ ಯೂದಗೋತ್ರದವರೂ ಉತ್ತರದಲ್ಲಿ ಯೋಸೇಫನ ಮನೆತನದವರೂ ನೆಲಸಬೇಕು.
ಈಗ ನಾವು ಗಿಬೆಯಕ್ಕೆ ಮಾಡುವದು ಇದೇ: ಅದಕ್ಕೆ ವಿರೋಧವಾಗಿ ಚೀಟುಗಳು ಬಿದ್ದ ಪ್ರಕಾರ ಹೋಗೋಣ.
ಆದರೆ ಜನರು ಪಾರಾದರು. ಸೌಲನು ಅವರಿಗೆ--ನನ್ನ ಮೇಲೆಯೂ ನನ್ನ ಮಗನಾದ ಯೋನಾತಾನನ ಮೇಲೆಯೂ ಚೀಟು ಹಾಕಿರಿ ಅಂದಾಗ ಯೋನಾತಾನನಿಗೆ ಚೀಟು ಬಿತ್ತು.
ಚೀಟು ಕಲಹಗಳನ್ನು ನಿಲ್ಲಿಸಿ ಬಲಿಷ್ಠರನ್ನು ಅಗಲಿಸುತ್ತದೆ;
ಇದಲ್ಲದೆ ಅವರು ಒಬ್ಬರಿಗೊ ಬ್ಬರು--ಬನ್ನಿ, ಚೀಟುಗಳನ್ನು ಹಾಕೋಣ; ಯಾವನ ನಿಮಿತ್ತ ಈ ಕೇಡು ನಮಗೆ ಬಂತೋ ತಿಳಿಯೋಣ ಎಂದು ಹೇಳಿಕೊಂಡರು. ಹಾಗೆಯೇ ಅವರು ಚೀಟು ಗಳನ್ನು ಹಾಕಿದಾಗ ಯೋನನ ಮೇಲೆ ಚೀಟು ಬಿತ್ತು.