TSK

TSK · ಙ್ಞಾನೋಕ್ತಿಗಳು 3:2

مراجع Treasury of Scripture Knowledge في Kannada KJV.

العودة إلى المقطع

ಹೀಗಾದರೆ ನಿಮ್ಮ ದಿವಸ ಗಳೂ ನಿಮ್ಮ ಮಕ್ಕಳ ದಿವಸಗಳೂ ಭೂಮಿಯಲ್ಲಿ ಆಕಾಶದ ದಿವಸಗಳ ಪ್ರಕಾರ ಕರ್ತನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶದಲ್ಲಿ ಹೆಚ್ಚುವವು.

ಜೀವವನ್ನು ಅವನು ನಿನ್ನಿಂದ ಬೇಡಲು ನೀನು ಅವನಿಗೆ ಯುಗಯುಗಾಂತರಗಳಿಗೂ ದೀರ್ಘಾಯುಷ್ಯವನ್ನು ಕೊಟ್ಟೆ.

ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.

ಹೌದು, ನಿನ್ನ ಮಕ್ಕಳ ಮಕ್ಕಳನ್ನೂ ಇಸ್ರಾಯೇಲಿನ ಮೇಲಿರುವ ಸಮಾಧಾನ ವನ್ನೂ ನೀನು ನೋಡುವಿ.

ಅವನು ಬೋಧಿಸಿ ನನಗೆ ಹೇಳಿದ್ದೇ ನಂದರೆ--ನನ್ನ ಮಾತುಗಳನ್ನು ನಿನ್ನ ಹೃದಯವು ಹಿಡಿದುಕೊಳ್ಳಲಿ; ನನ್ನ ಆಜ್ಞೆಗಳನ್ನು ಕೈಕೊಂಡು ಜೀವಿಸು.

ನನ್ನ ಮೂಲಕ ನಿನ್ನ ದಿನಗಳು ಹೆಚ್ಚುವವು; ನಿನ್ನ ಜೀವನದ ವರುಷಗಳು ವೃದ್ಧಿಯಾಗುವವು.

ನೀತಿಯ ಕೆಲಸವು ಸಮಾಧಾನವೂ ನೀತಿಯ ಫಲವು ನಿತ್ಯವಾದ ಶಾಂತಿಯೂ ಭರವಸವೂ ಆಗಿರುವದು.

ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ದೇವರೊಂದಿಗೆ ಸಮಾಧಾನ ಉಂಟಾಗಿದೆ.

ನಿರೀಕ್ಷೆಗೆ ಆಧಾರನಾದ ದೇವರು ಪವಿತ್ರಾತ್ಮನ ಬಲದಿಂದ ನೀವು ನಿರೀಕ್ಷೆಯಲ್ಲಿ ಅಭಿವೃದ್ಧಿ ಹೊಂದು ವಂತೆ ನಂಬಿಕೆಯಿಂದುಂಟಾದ ಸಂತೋಷ ಸಮಾಧಾನಗಳಿಂದ ನಿಮ್ಮನ್ನು ತುಂಬಿಸಲಿ.

ದೇಹಸಾಧನೆಯು ಸ್ವಲ್ಪ ಮಟ್ಟಿಗೆ ಲಾಭಕರವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಲಾಭಕರವಾದದ್ದು; ಆದಕ್ಕೆ ಈಗಲೂ ಮುಂದೆ ಬರುವದಕ್ಕೂ ಜೀವಾಗ್ದಾನ ಉಂಟು.