TSK

TSK · ಙ್ಞಾನೋಕ್ತಿಗಳು 31:22

مراجع Treasury of Scripture Knowledge في Kannada KJV.

العودة إلى المقطع

ಆದರೆ ಆಭರಣಗಳೂ ಕಂಠಮಾಲೆ ಗಳೂ ಮಿದ್ಯಾನ್ಯರ ಅರಸುಗಳು ಹೊದ್ದುಕೊಂಡಿದ್ದ ರಕ್ತಾಂಬರ ವಸ್ತ್ರಗಳೂ ಅವರ ಒಂಟೆಗಳ ಕೊರಳಿಗೆ ಇದ್ದ ಸರಪಣಿಗಳೂ ಹೊರತು ಅವನು ಕೇಳಿ ತೆಗೆದು ಕೊಂಡ ಬಂಗಾರದ ವಾಲೆಗಳ ತೂಕವು ಸಾವಿರದ ಏಳು ನೂರು ಶೆಕೆಲ್‌ ತೂಕವಾಗಿತ್ತು.

ಮೊರ್ದೆಕೈ ನೀಲ ಶುಭ್ರವಾದ ರಾಜವಸ್ತ್ರವನ್ನು ಧರಿಸಿಕೊಂಡು ಬಂಗಾರದ ದೊಡ್ಡ ಕಿರೀಟವನ್ನು ಇಟ್ಟು ಕೊಂಡು ರಕ್ತವರ್ಣವುಳ್ಳ ನಯವಾದ ವಸ್ತ್ರ ಧರಿಸಿ ಕೊಂಡು ಅರಸನ ಸಮ್ಮುಖದಿಂದ ಹೊರಟು ಹೋದನು. ಆಗ ಶೂಷನ್‌ ಪಟ್ಟಣವು ಸಂಭ್ರಮವೂ ಸಂತೋಷವೂ ಉಳ್ಳದ್ದಾಗಿತ್ತು.

ಚಿತ್ರವಾಗಿ ನೇಯ್ದ ವಸ್ತುಗಳಿಂದಲೂ ವಿಚಿತ್ರ ವಸ್ತು ಗಳಿಂದಲೂ ಐಗುಪ್ತದ ನಯವಾದ ನಾರುಮಡಿ ಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ.

ಜಡೆ ಹೆಣೆದುಕೊ ಳ್ಳುವದೂ ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದೂ ಇಲ್ಲವೆ ಉಡಿಗೆಗಳನ್ನು ಧರಿಸಿಕೊಳ್ಳುವದೂ ಈ ಹೊರ ಗಣ ಅಲಂಕಾರವು ಬೇಡ.

ಪರಲೋಕದಲ್ಲಿರುವ ಸೈನ್ಯಗಳು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಆತನ ಹಿಂದೆ ಬರುತ್ತಿದ್ದವು.