TSK

TSK · ದಾನಿಯೇಲನು 9:21

Treasury of Scripture Knowledge references in Kannada KJV.

Back to passage

ಮಧ್ಯಾಹ್ನವಾದ ತರುವಾಯ ಸಾಯಂಕಾಲದ ಬಲಿ ಅರ್ಪಿಸಲ್ಪಡುವ ವೇಳೆಯ ವರೆಗೂ ಪ್ರವಾದಿಸುತ್ತಾ ಇದ್ದರು. ಆದರೆ ಶಬ್ದವಾ ದರೂ ಪ್ರತ್ಯುತ್ತರಕೊಡುವವನಾದರೂ ಲಕ್ಷಿಸುವವ ನಾದರೂ ಇರಲಿಲ್ಲ.

ಆಗ ಸೆರೆಯಾಗಿ ಒಯ್ಯಲ್ಪಟ್ಟು ತಿರುಗಿ ಬಂದವರ ಅಪರಾಧಕ್ಕೋಸ್ಕರ ಇಸ್ರಾಯೇಲ್‌ ದೇವರ ಮಾತುಗಳಿಗೆ ಹೆದರಿಕೊಂಡಿದ್ದ ಮನುಷ್ಯರೆಲ್ಲರೂ ನನ್ನ ಬಳಿಗೆ ಕೂಡಿ ಬಂದರು. ಆದರೆ ನಾನು ಸಾಯಂಕಾಲದ ಬಲಿಯನ್ನು ಅರ್ಪಿಸುವ ವರೆಗೆ ಭ್ರಮೆಗೊಂಡು ಕುಳಿತುಕೊಂಡಿದ್ದೆನು;

ಆತನು ತನ್ನ ದೂತರನ್ನು ಆತ್ಮಗಳನ್ನಾಗಿಯೂ ಉರಿಯುವ ಬೆಂಕಿಯನ್ನು ತನ್ನ ಸೇವಕರನ್ನಾಗಿಯೂ ಮಾಡುತ್ತಾನೆ.

ಆಗ ಸೆರಾಫಿಯರಲ್ಲಿ ಒಬ್ಬನು ತಂಡಸದಿಂದ ಯಜ್ಞವೇದಿಯಲ್ಲಿರುವ ಕೆಂಡವನ್ನು ಕೈಯಲ್ಲಿ ಹಿಡಿದುಕೊಂಡು ಹಾರಿಬಂದು

ಈಗ ಅವನು ನನ್ನ ಸಂಗಡ ಮಾತನಾಡುತ್ತಿರುವಾಗ ನಾನು ಮುಖ ಕೆಳಗಾಗಿ ನೆಲದ ಮೇಲೆ ಗಾಢ ನಿದ್ರೆಯಲ್ಲಿ ಬಿದ್ದಿದ್ದೆನು; ಆದರೆ ಅವನು ನನ್ನನ್ನು ಮುಟ್ಟಿ ನಾನು ನಿಂತುಕೊಳ್ಳುವಂತೆ ಮಾಡಿದನು.

ಆಗ ಇಗೋ, ಮನುಷ್ಯಕುಮಾರನ ಹೋಲಿಕೆಯ ಹಾಗಿ ರುವ ಒಬ್ಬನು ನನ್ನ ತುಟಿಗಳನ್ನು ಮುಟ್ಟಿದನು. ಆಗ ನಾನು ಬಾಯಿತೆರೆದು ಮಾತನಾಡಿ ನನ್ನ ಮುಂದೆ ನಿಂತಿದ್ದವನಿಗೆ ಹೇಳಿದ್ದೇನಂದರೆ--ಓ ನನ್ನ ಒಡೆಯನೇ, ಆ ದರ್ಶನದ ನಿಮಿತ್ತ ನನ್ನ ಸಂಕಟಗಳು ನನ್ನ ಮೇಲೆ ತಿರುಗಿಕೊಂಡಿವೆ; ನಾನು ತ್ರಾಣವನ್ನು ಉಳಿಸಿಕೊಳ್ಳ ಲಿಲ್ಲ.

ಹೆಚ್ಚು ಕಡಿಮೆ ಒಂಭತ್ತನೆಯ ತಾಸಿನಲ್ಲಿ ಯೇಸು--ಏಲೀ, ಏಲೀ, ಲಮಾ ಸಬಕ್ತಾನೀ? ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈ ಬಿಟ್ಟಿದ್ದೀ ಎಂದು ಮಹಾಶಬ್ದದಿಂದ ಕೂಗಿ ಹೇಳಿದನು.

ಪ್ರಾರ್ಥನೆಯ ಸಮಯವಾದ ಒಂಭತ್ತ ನೆಯ ತಾಸಿನಲ್ಲಿ (ಮೂರು ಘಂಟೆಗೆ) ಪೇತ್ರ ಯೋಹಾನರು ಕೂಡಿಕೊಂಡು ದೇವಾಲಯಕ್ಕೆ ಹೋದರು.

ಮರುದಿನ ಅವರು ಪ್ರಯಾಣಮಾಡಿ ಆ ಊರಿನ ಹತ್ತಿರಕ್ಕೆ ಬರುತ್ತಿರುವಾಗ ಪೇತ್ರನು ಸುಮಾರು ಆರನೇ ತಾಸಿನಲ್ಲಿ (ಹನ್ನೆರಡು ಘಂಟೆಗೆ) ಪ್ರಾರ್ಥನೆ ಮಾಡು ವದಕ್ಕಾಗಿ ಮಾಳಿಗೆಯನ್ನು ಹತ್ತಿದನು.

ದೂತರ ವಿಷಯ ದಲ್ಲಿ ಆತನು ಹೇಳುವದೇನಂದರೆ--ದೇವರು ತನ್ನ ದೂತರನ್ನು ಆತ್ಮಗಳಾಗಿಯೂ ತನ್ನ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾನೆ ಎಂಬದು.