TSK

TSK · ಅಪೊಸ್ತಲರ ಕೃತ್ಯಗ 26:16

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

¶ ಯೆಹೋವನು ನನಗೆ, “ನರಪುತ್ರನೇ, ಎದ್ದು ನಿಂತುಕೋ, ನಿನ್ನ ಸಂಗಡ ಮಾತನಾಡುವೆನು” ಎಂದು ಹೇಳಿದನು.

ನಾವಾದರೋ ಪ್ರಾರ್ಥನೆಯನ್ನೂ, ವಾಕ್ಯೋಪದೇಶವನ್ನೂ ಮಾಡುವುದರಲ್ಲಿ ನಿರತರಾಗಿರುವೆವು” ಎಂದು ಹೇಳಿದರು.

ಕರ್ತನು ಅವನಿಗೆ, ‹“ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ, ಅರಸುಗಳಿಗೂ, ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.›

ಇದಲ್ಲದೆ ಕರ್ತನು ರಾತ್ರಿ ಪೌಲನಿಗೆ ದರ್ಶನ ಕೊಟ್ಟು; ‹“ನೀನು ಹೆದರಬೇಡ; ಆದರೆ ಸುಮ್ಮನಿರದೆ ಸುವಾರ್ತೆಯನ್ನು ಸಾರುತ್ತಲೇ ಇರು,›

ಪೌಲನು ಅವರನ್ನು ವಂದಿಸಿ ತನ್ನ ಸೇವೆಯ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ ಕಾರ್ಯಗಳನ್ನು ಒಂದೊಂದಾಗಿ ವಿವರಿಸಿದನು.

¶ “ಆಗ ಅವನು; ‘ನಮ್ಮ ಪೂರ್ವಿಕರ ದೇವರು, ತನ್ನ ಚಿತ್ತವನ್ನು ನೀನು ತಿಳಿದುಕೊಳ್ಳುವುದಕ್ಕೂ, ಆ ನೀತಿವಂತನನ್ನು ನೋಡುವುದಕ್ಕೂ, ಆತನ ಬಾಯಿಂದ ಬಂದ ಮಾತನ್ನು ಕೇಳುವುದಕ್ಕೂ ನಿನ್ನನ್ನು ನೇಮಿಸಿದ್ದಾನೆ.

¶ ಅಂದು ರಾತ್ರಿ ಕರ್ತನು ಪೌಲನ ಬಳಿಯಲ್ಲಿ ನಿಂತುಕೊಂಡು; ‹“ಧೈರ್ಯದಿಂದಿರು; ನೀನು ಯೆರೂಸಲೇಮಿನಲ್ಲಿ ನನ್ನ ಸಂಗತಿಯನ್ನೆಲ್ಲಾ ಸಾಕ್ಷಿಯಾಗಿ ಹೇಳಿದಂತೆಯೇ ರೋಮಾಪುರದಲ್ಲಿಯೂ ಸಾಕ್ಷಿಹೇಳಬೇಕಾಗುವುದು”› ಅಂದನು.

ಆತನು ವಂಶಕ್ರಮದಿಂದ ದಾವೀದನ ಸಂತಾನದಲ್ಲಿ ಹುಟ್ಟಿದವನೂ ಪವಿತ್ರವಾದ ಆತ್ಮನ ಶಕ್ತಿಗನುಸಾರವಾಗಿ ಸತ್ತಮೇಲೆ ಜೀವಿತನಾಗಿ ಎದ್ದು ಬಂದು ದೇವಕುಮಾರನೆಂದು ನಿರ್ಣಯಿಸಲ್ಪಟ್ಟವನೂ ಆಗಿದ್ದಾನೆ.

¶ ಆದ್ದರಿಂದ ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾದ ನಾವು ಧೈರ್ಯಗೆಟ್ಟು ಹಿಂಜರಿಯುವುದಿಲ್ಲ.

¶ ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ಹೊಗಳಿಕೊಳ್ಳುವುದು ನನಗೆ ಅನಿವಾರ್ಯವಾಗಿದೆ. ಆದ್ದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳನ್ನೂ ಮತ್ತು ತಿಳಿಯಪಡಿಸಿದ ರಹಸ್ಯಗಳನ್ನೂ ಕುರಿತು ಹೇಳುತ್ತೇನೆ.

ದೈವಪ್ರೇರಣೆಗೆ ಅನುಸಾರವಾಗಿ ಹೋಗಿ, ಅನ್ಯಜನರಲ್ಲಿ ನಾನು ಸಾರುವ ಸುವಾರ್ತೆಯು ಏನೆಂಬುದನ್ನು ಅಲ್ಲಿದ್ದ ಗಣ್ಯರಿಗೆ ಪ್ರತ್ಯೇಕವಾಗಿ ತಿಳಿಸಿದೆನು. ಏಕೆಂದರೆ ನಾನು ಸುವಾರ್ತೆಗಾಗಿ ಪಟ್ಟ ಶ್ರಮವಾಗಲಿ, ಈಗ ಪಡುತ್ತಿರುವ ಶ್ರಮವಾಗಲಿ ನಿಷ್ಫಲವಾಗಬಾರದೆಂದು ತಿಳಿಸಿದೆನು.

ಈ ಸುವಾರ್ತೆಯನ್ನು ಕ್ರಿಸ್ತನ ನಂಬಿಗಸ್ತ ಸೇವಕನೂ, ನಮ್ಮ ಪ್ರಿಯ ಜೊತೆಸೇವಕನೂ ಆದ ಎಪಫ್ರನಿಂದ ನೀವು ಕಲಿತುಕೊಂಡಿದ್ದೀರಿ.

ದೇವರ ಸಂಕಲ್ಪದ ಮೇರೆಗೆ ನಿಮ್ಮ ಪ್ರಯೋಜನಕ್ಕೋಸ್ಕರವಾಗಿ ನಾನು ಸಭೆಗೆ ಸೇವಕನಾದೆನು. ದೇವರು ತನ್ನ ವಾಕ್ಯವನ್ನು ಸಂಪೂರ್ಣವಾಗಿ ತಿಳಿಸುವ ಕಾರ್ಯವನ್ನು ನನಗೆ ದಯಪಾಲಿಸಿದನು.

¶ ನನಗೆ ಬಲವನ್ನು ದಯಪಾಲಿಸಿದವನು ನಮ್ಮ ಕರ್ತನಾದ ಯೇಸು ಕ್ರಿಸ್ತನೇ. ಅದಕ್ಕಾಗಿ ನಾನು ಕೃತಜ್ಞತೆಯುಳ್ಳವನಾಗಿದ್ದೇನೆ. ಮೊದಲು ದೂಷಕನೂ, ಹಿಂಸಕನೂ, ಕೇಡುಮಾಡುವವನೂ ಆಗಿದ್ದ ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ, ತನ್ನ ಸೇವೆಗೆ ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರಮಾಡುತ್ತೇನೆ. ನಾನು ಅಜ್ಞಾನಿಯಾಗಿ ತಿಳಿಯದೆ ಅಪನಂಬಿಕೆಯಲ್ಲಿ ಆ ರೀತಿ ನಡೆದುಕೊಂಡದ್ದರಿಂದ ನನ್ನ ಮೇಲೆ ಆತನಿಗೆ ಕರುಣೆ ಉಂಟಾಯಿತು;

ಆದರೆ ನೀನು ಎಲ್ಲಾ ವಿಷಯಗಳಲ್ಲಿಯೂ ಸ್ವಸ್ಥಚಿತ್ತನಾಗಿರು, ಹಿಂಸೆಯನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ಮಾಡು.