TSK

TSK · ವಿಮೋಚನಕಾಂಡ 13:2

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ನಿಮ್ಮಲ್ಲಿಯೂ ನಿಮ್ಮ ಪಶುಗಳಲ್ಲಿಯೂ ಹುಟ್ಟುವ ಪ್ರಥಮ ಗರ್ಭಫಲವು ಗಂಡಾದ ಪಕ್ಷಕ್ಕೆ ಅದು ಯೆಹೋವನ ಭಾಗವೆಂದು ತಿಳಿದುಕೊಂಡು ಅದನ್ನು ಆತನಿಗೆ ಸಮರ್ಪಿಸಬೇಕು.

¶ ನಿಮ್ಮ ಕಣದಿಂದ ಹಾಗೂ ದ್ರಾಕ್ಷಾಲತೆಯಿಂದ ನನಗೆ ಸಲ್ಲಿಸತಕ್ಕದ್ದನ್ನು ಸಮರ್ಪಿಸುವುದಕ್ಕೆ ತಡಮಾಡಬಾರದು. ನಿಮ್ಮ ಚೊಚ್ಚಲು ಗಂಡು ಮಕ್ಕಳನ್ನು ನನಗೆ ಸಮರ್ಪಿಸಬೇಕು.

¶ “ಪ್ರಥಮ ಗರ್ಭಫಲವೆಲ್ಲಾ ಅಂದರೆ ನಿಮ್ಮ ದನ ಕುರಿಗಳಲ್ಲಿ ಹುಟ್ಟುವ ಚೊಚ್ಚಲು ಮರಿಗಳೆಲ್ಲಾ ಗಂಡಾದ ಪಕ್ಷಕ್ಕೆ ನನ್ನದೇ.

ಇಸ್ರಾಯೇಲರಲ್ಲಿ ಚೊಚ್ಚಲಾದವರು ನನ್ನ ಸೊತ್ತು. ಐಗುಪ್ತ ದೇಶದಲ್ಲಿದ್ದ ಚೊಚ್ಚಲಾದದ್ದನ್ನೆಲ್ಲಾ ನಾನು ಸಂಹಾರಮಾಡಿದಾಗ ಇಸ್ರಾಯೇಲರಲ್ಲಿರುವ ಚೊಚ್ಚಲಾದ ಮನುಷ್ಯರನ್ನೂ, ಪಶುಗಳನ್ನೂ ನನ್ನ ಸ್ವಂತವಾಗಿ ಪ್ರತಿಷ್ಠಿಸಿಕೊಂಡೆನು; ಅವರು ನನ್ನವರಾಗಿರಬೇಕು. ನಾನೇ ಯೆಹೋವನು” ಎಂದು ಹೇಳಿದನು.

ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಸಕಲಪ್ರಾಣಿಗಳಲ್ಲಿ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲಮಕ್ಕಳಿಗೂ, ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.

ನಮ್ಮ ಚೊಚ್ಚಲಮಕ್ಕಳ ವಿಷಯದಲ್ಲೂ, ನಮ್ಮ ಪಶುಗಳ ಹಿಂಡುಗಳಲ್ಲಿ ಚೊಚ್ಚಲಮರಿಗಳ ವಿಷಯದಲ್ಲೂ ಧರ್ಮಶಾಸ್ತ್ರವಿಧಿಗಳಿಗೆ ಅನುಸಾರವಾಗಿ ನಡೆದುಕೊಳ್ಳುವೆವು. ನಮ್ಮ ಚೊಚ್ಚಲ ಕರುಗಳನ್ನೂ, ಚೊಚ್ಚಲ ಆಡು, ಕುರಿಮರಿಗಳನ್ನೂ ನಮ್ಮ ದೇವಾಲಯಕ್ಕೆ ತಂದು ಅಲ್ಲಿ ಕೆಲಸ ನಡೆಸುತ್ತಿರುವ ಯಾಜಕರಿಗೆ ಕೊಡುವೆವು.