TSK

TSK · ಯೆರೆಮಿಯ 21:1

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

“ನಮ್ಮ ಪೂರ್ವಿಕರು ನಮಗೆ ಸಿಕ್ಕಿರುವ ಈ ಗ್ರಂಥದಲ್ಲಿನ ಧರ್ಮೋಪದೇಶ ವಾಕ್ಯಗಳಿಗೆ ಕಿವಿಗೊಡದೆಯೂ, ಅವುಗಳನ್ನು ಕೈಕೊಳ್ಳದೆಯೂ ಹೋದುದರಿಂದ ನಾವು ಯೆಹೋವನ ಉಗ್ರಕೋಪಕ್ಕೆ ಪಾತ್ರರಾಗಿದ್ದೇವೆ. ಆದುದರಿಂದ ನೀವು ನನಗಾಗಿಯೂ, ಜನರಿಗಾಗಿಯೂ, ಮತ್ತು ಎಲ್ಲಾ ಯೆಹೂದ್ಯರಿಗಾಗಿಯೂ ಯೆಹೋವನ ಬಳಿಗೆ ಹೋಗಿ ಈ ಗ್ರಂಥದಲ್ಲಿನ ಧರ್ಮೋಪದೇಶ ವಾಕ್ಯಗಳ ಕುರಿತಾಗಿ ವಿಚಾರಿಸಿರಿ” ಎಂದು ಆಜ್ಞಾಪಿಸಿದನು.

ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಹಿಡಿದುಕೊಂಡು ಹೋಗಿದ್ದ ಜನರಲ್ಲಿ ಮಹಾಯಾಜಕನಾದ ಸೆರಾಯನು, ಎರಡನೆಯ ಯಾಜಕನಾದ ಚೆಫನ್ಯನು ಮೂರು ಮಂದಿ ದ್ವಾರಪಾಲಕರು,

ಯೆರೋಹಾಮನ ಮಗನಾದ ಅದಾಯ ಇವನೂ ಮತ್ತು ಇವನ ಸಹೋದರರೂ ಯೆರೋಹಾಮನು, ಪಶ್ಹೂರನ ಮಗ; ಇವನು ಮಲ್ಕೀಯನ ಮಗ, ಇವನು ಮಾಸೈಯನ ಮಗ. ಇವನು ಅದೀಯೇಲನ ಮಗ. ಇವನು ಯಹ್ಜೇರನ ಮಗ. ಇವನು ಮೆಷುಲ್ಲಾಮನ ಮಗ. ಇವನು ಮೆಷಿಲ್ಲೋಮೋತನ ಮಗ. ಇವನು ಇಮ್ಮೇರನ ಮಗ.

ಮತ್ತು ದೇವಾಲಯದ ಸೇವೆ ನಡೆಸುತ್ತಿದ್ದ ಇವರ ಬಂಧುಗಳು ಒಟ್ಟು ಎಂಟುನೂರ ಇಪ್ಪತ್ತೆರಡು ಮಂದಿ. ಇವರಲ್ಲದೆ ಅದಾಯನೆಂಬುವನು ಇನ್ನೊಬ್ಬನು. ಇವನು ಯೆರೋಹಾಮನ ಮಗ; ಇವನು ಪೆಲಲ್ಯನ ಮಗ; ಇವನು ಅಮ್ಚೀಯನ ಮಗ; ಇವನು ಜೆಕರ್ಯನ ಮಗ; ಇವನು ಪಷ್ಹೂರನ ಮಗ; ಇವನು ಮಲ್ಕೀಯನ ಮಗ.

¶ ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಹತ್ತನೆಯ ವರ್ಷದಲ್ಲಿ, ಅಂದರೆ ನೆಬೂಕದ್ನೆಚ್ಚರನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ, ಯೆಹೋವನು ಯೆರೆಮೀಯನಿಗೆ ತನ್ನ ವಾಕ್ಯವನ್ನು ದಯಪಾಲಿಸಿದನು.

¶ ಯೋಷೀಯನ ಮಗನಾದ ಚಿದ್ಕೀಯನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದ ದೇಶದ ಪಟ್ಟಕ್ಕೆ ತರಲ್ಪಟ್ಟು ಯೆಹೋಯಾಕೀಮನ ಮಗನಾದ ಕೊನ್ಯನಿಗೆ ಬದಲಾಗಿ ರಾಜ್ಯವಾಳುತ್ತಿದ್ದನು.

¶ ಮತ್ತಾನನ ಮಗನಾದ ಶೆಫತ್ಯ, ಪಷ್ಹೂರನ ಮಗನಾದ ಗೆದಲ್ಯ, ಸೆಲೆಮ್ಯನ ಮಗನಾದ ಯೂಕಲ, ಮಲ್ಕೀಯನ ಮಗನಾದ ಪಷ್ಹೂರ ಇವರು ಯೆರೆಮೀಯನ ಮಾತುಗಳನ್ನು ಕೇಳುತ್ತಿದ್ದರು.

ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಹಿಡಿದುಕೊಂಡುಹೋದ ಜನರಲ್ಲಿ ಮಹಾಯಾಜಕನಾದ ಸೆರಾಯನು, ಎರಡನೆಯ ತರಗತಿಯ ಯಾಜಕನಾದ ಚೆಫನ್ಯನು, ಮೂರು ಜನ ದ್ವಾರಪಾಲಕರು,