TSK

TSK · ದಾನಿಯೇಲನು 2:21

Treasury of Scripture Knowledge references in Kannada KJV.

ಅಂಗೀಕಾರಕ್ಕೆ ಹಿಂತಿರುಗಿ

ನಾನು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕ ದಿಂದಲೂ ಎಲ್ಲಾ ತರವಾದ ಕೆಲಸದ ಕಲೆಯಿಂದಲೂ ತುಂಬಿಸಿದ್ದೇನೆ.

ಕರ್ತನು ಬಡತನವನ್ನು ಐಶ್ವರ್ಯ ವನ್ನು ಕೊಡುವಾತನೂ ತಗ್ಗಿಸುವಾತನೂ ಉನ್ನತಮಾಡು ವಾತನೂ ಆಗಿದ್ದಾನೆ.

ಅರಸನು ತೀರಿಸಿದ ನ್ಯಾಯವನ್ನು ಕುರಿತು ಸಮಸ್ತ ಇಸ್ರಾಯೇ ಲ್ಯರು ಕೇಳಿ ಅರಸನಿಗೆ ಭಯಪಟ್ಟರು; ಯಾಕಂದರೆ ನ್ಯಾಯತೀರಿಸಲು ಅವನಲ್ಲಿ ದೇವರ ಜ್ಞಾನವಿದೆ ಎಂದು ನೋಡಿದರು.

ದೇವರು ಸೊಲೊಮೋನನ ಹೃದಯದಲ್ಲಿ ಉಂಟು ಮಾಡಿದ ಅವನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿಯಲ್ಲಿರುವ ಸಮಸ್ತರು ಅವನ ಬಳಿಗೆ ಬಂದರು.

ಇಗೋ, ದರ್ಶಿಯಾದ ಸಮುವೇಲನ ಪುಸ್ತಕ ದಲ್ಲಿಯೂ ಪ್ರವಾದಿಯಾದ ನಾತಾನನ ಪುಸ್ತಕ ದಲ್ಲಿಯೂ ದರ್ಶಿಯಾದ ಗಾದನ ಪುಸ್ತಕದಲ್ಲಿಯೂ ಬರೆಯಲ್ಪಟ್ಟಿವೆ.

ಆಗ ನೀತಿ ನ್ಯಾಯಗಳನ್ನು ತಿಳಿದವರೆಲ್ಲರಿಗೂ ಅರಸನ ರೀತಿಯ ಪ್ರಕಾರವಾಗಿ ಅರಸನು ಕಾಲ ಜ್ಞಾನಿಗಳ ಸಂಗಡಲೂ

ಲೆಕ್ಕವಿಲ್ಲದ ಪರಾಕ್ರಮಿಗಳನ್ನು ಚೂರು ಚೂರು ಮಾಡಿ, ಮತ್ತೊಬ್ಬರನ್ನು ಅವರ ಸ್ಥಳದಲ್ಲಿ ನಿಲ್ಲಿಸು ತ್ತಾನೆ.

ನಿಮ್ಮ ಕೊಂಬನ್ನು ಉನ್ನತಕ್ಕೆ ಎತ್ತಬೇಡಿರಿ; ಬೊಗ್ಗದ ಕುತ್ತಿಗೆಯಿಂದ ಮಾತಾಡಬೇಡಿರಿ.

ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.

ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ; ಪ್ರತಿಯೊಂದು ಉದ್ದೇಶಕ್ಕೂ ಒಂದು ಸಮಯವಿದೆ.

ಆದರೆ ನೀವು ಕನಸ್ಸನ್ನು ನನಗೆ ತಿಳಿಸದೆ ಹೋದರೆ ನಿಮಗೆ ಒಂದೇ ನಿರ್ಣಯ ಉಂಟು; ಕಾಲ ಬದಲಾಗುವ ವರೆಗೂ ನೀವು ನನ್ನ ಮುಂದೆ ಕೆಟ್ಟ ಸುಳ್ಳು ಮಾತುಗಳನ್ನು ಮಾತನಾಡಲು ಸಿದ್ಧಮಾಡಿಕೊಂಡಿರುವಿರಿ; ಆದದರಿಂದ ಕನಸನ್ನು ನನಗೆ ತಿಳಿಸಿ, ಅದರ ಅರ್ಥವನ್ನೂ ನನಗೆ ತಿಳಿಸಬಲ್ಲಿ ರೆಂದು ನಾನು ತಿಳಿದುಕೊಂಡಿರುತ್ತೇನೆ ಎಂದು ಹೇಳಿ ದನು.

ಈ ವಿಷಯವು ಪಾಲಕರ ಕಟ್ಟಡದಿಂದಲೂ ಈ ಸಂಗತಿಯು ಪರಿಶುದ್ಧರ ಮಾತಿನಿಂದಲೂ ಉಂಟಾಯಿತು; ಮಹೋ ನ್ನತನು ಮನುಷ್ಯರ ರಾಜ್ಯದಲ್ಲಿ ಆಳುತ್ತಾನೆಂದೂ ತನ್ನ ಮನಸ್ಸಿಗೆ ಸರಿಯಾದವರಿಗೆ ಅದನ್ನು ಕೊಡುತ್ತಾನೆಂದೂ ಮನುಷ್ಯರಲ್ಲಿ ನೀಚರಾದವರನ್ನು ಅದರ ಮೇಲೆ ನೇಮಿಸುತ್ತಾನೆಂದೂ ಜೀವಂತರಿಗೆ ತಿಳಿಯಬೇಕೆಂದೇ ಸಾರಿದನು.

ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು, ನಿನಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸುವರು. ಮಹೋ ನ್ನತನು ಮನುಷ್ಯರ ರಾಜ್ಯವನ್ನಾಳುವನೆಂದೂ ತನ್ನ ಮನಸ್ಸಿಗೆ ಸರಿಬಂದವರಿಗೆ ಅದನ್ನು ಕೊಡುವೆನೆಂದೂ ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವವು.

ವರುಷಗಳ ಅಂತ್ಯದಲ್ಲಿ ಅವರು ಒಬ್ಬರಿಗೊಬ್ಬರು ಒಂದಾಗುವರು; ಹೇಗಂದರೆ ದಕ್ಷಿಣದ ಅರಸನ ಮಗಳು ಉತ್ತರದ ಅರಸನ ಬಳಿಗೆ ಬಂದು ಒಪ್ಪಂದ ಮಾಡಿಕೊಳ್ಳುವಳು; ಆದರೆ ಅವಳು ಭುಜ ಬಲವನ್ನು ಉಳಿಸಿಕೊಳ್ಳುವದಿಲ್ಲ; ಅವನೂ ಅವನ ತೋಳುಗಳೂ ನಿಲ್ಲುವದಿಲ್ಲ; ಅವಳೂ ಅವಳನ್ನು ಕರೆ ತಂದವರೂ ಅವಳನ್ನು ಪಡೆದವನೂ ಆ ಕಾಲದಲ್ಲಿ ಅವಳನ್ನು ಬಲಪಡಿಸಿದವನೂ ಉಳಿಯುವದಿಲ್ಲ.

ಯಾಕ ಂದರೆ ನಿಮ್ಮ ವಿರೋಧಿಗಳೆಲ್ಲರೂ ಪ್ರತಿವಾದ ಮಾಡ ದಂಥ ಇಲ್ಲವೆ ವಿರೋಧಿಸದಂಥ ಬಾಯನ್ನೂ ಜ್ಞಾನ ವನ್ನೂ ನಾನು ನಿಮಗೆ ಕೊಡುವೆನು.

ಆದರೆ ನೀವು ಕ್ರಿಸ್ತ ಯೇಸುವಿನಲ್ಲಿ ರುವದು ಆತನಿಂದಲೇ; ಆತನು ನಮಗೆ ದೇವರ ಕಡೆಯಿಂದ ಜ್ಞಾನವು ನೀತಿ ಶುದ್ಧೀಕರಣ ವಿಮೋಚನೆ ಗಳಾಗಿ ಮಾಡಲ್ಪಟ್ಟಿದ್ದಾನೆ.

ಪ್ರತಿಯೊಂದು ಒಳ್ಳೇ ದಾನವೂ ಸಂಪೂರ್ಣವಾದ ಪ್ರತಿವರವೂ ಮೇಲಣ ವುಗಳೇ; ಅವು ಬೆಳಕುಗಳ ತಂದೆಯಿಂದ ಇಳಿದು ಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ನೆರಳೂ ಇಲ್ಲ.

ಆತನ ತೊಡೆಯ ಮೇಲೆಯೂ ವಸ್ತ್ರದ ಮೇಲೆಯೂ--ರಾಜಾ ಧಿರಾಜನೂ ಕರ್ತರ ಕರ್ತನೂ ಎಂಬ ಹೆಸರು ಬರೆದದೆ.