TSK

TSK · 1 ಪೇತ್ರನು 2:13

مراجع Treasury of Scripture Knowledge في ಕನ್ನಡ IRV.

العودة إلى المقطع

ದುರಾತ್ಮನಿಗೆ ದಂಗೆಯ ಮೇಲೆಯೇ ಮನಸ್ಸು, ಕ್ರೂರದೂತನು ಅವನನ್ನು ಆಕ್ರಮಿಸುವನು.

ನಾನು ಯಾವ ಪಟ್ಟಣಕ್ಕೆ ನಿಮ್ಮನ್ನು ಸಾಗಿಸಿದೆನೋ, ಅದರ ಕ್ಷೇಮವನ್ನು ಹಾರೈಸಿ ಅದಕ್ಕಾಗಿ ಯೆಹೋವನನ್ನು ಪ್ರಾರ್ಥಿಸಿರಿ; ಅದರ ಕ್ಷೇಮವೇ ನಿಮ್ಮ ಕ್ಷೇಮ.

ಯೇಸು, ‹“ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ”› ಎಂದು ಹೇಳಿದನು. ಅದಕ್ಕೆ ಅವರು ಆತನ ವಿಷಯವಾಗಿ ಬಹು ಆಶ್ಚರ್ಯಪಟ್ಟರು.

¶ ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ. ಯಾಕೆಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವು ದೊರೆತಿರುವುದಿಲ್ಲ. ಇರುವ ಅಧಿಕಾರಿಗಳಾದರೋ ದೇವರಿಂದ ನೇಮಿಸಲ್ಪಟ್ಟವರು.

¶ ಎಲ್ಲಾದಕ್ಕಿಂತ ಮೊದಲು ಎಲ್ಲಾ ಜನರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ, ಪ್ರಾರ್ಥನೆಗಳನ್ನೂ, ಮನವಿಗಳನ್ನೂ, ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

ಮುಖ್ಯವಾಗಿ ಶಾರೀರಿಕ ಬಂಡುತನದ ದುರಾಶೆಗಳಲ್ಲಿ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೇ ಸ್ವೇಚ್ಛಾಪರರಾಗಿದ್ದಾರೆ. ಮಹಿಮಾಪದವಿಯವರನ್ನು ನಿರ್ಭಯವಾಗಿ ದೂಷಿಸುವರು.