ಸುನ್ನತಿಯಾಗದ ಗಂಡಸಿಗೆ ನನ್ನ ಒಡಂಬಡಿಕೆಯನ್ನು ವಿಾರಿದ ಕಾರಣ ಅವನು ಜನರೊಳಗಿಂದ ತೆಗೆದುಹಾಕಲ್ಪಡಬೇಕು ಅಂದನು.
TSK
TSK · ಯಾಜಕಕಾಂಡ 7:21
مراجع Treasury of Scripture Knowledge في Kannada KJV.
ಏಳು ದಿನಗಳ ವರೆಗೆ ಹುಳಿಹಿಟ್ಟು ನಿಮ್ಮ ಮನೆಗಳಲ್ಲಿ ಇರಬಾರದು; ಹುಳಿಕಲಸಿದ್ದನ್ನು ಯಾರು ತಿನ್ನುವರೋ ಆ ವ್ಯಕ್ತಿಯು ಪರದೇಶದವನಾಗಲಿ ಸ್ವದೇಶದವ ನಾಗಲಿ ಅವನನ್ನು ಇಸ್ರಾಯೇಲ್ ಸಭೆಯೊಳಗಿಂದ ತೆಗೆದು ಹಾಕಬೇಕು.
ಇಲ್ಲವೆ ಯಾವನಾದರೂ ಅಶುದ್ಧವಾದ ಯಾವದನ್ನಾದರೂ ಮುಟ್ಟಿದರೆ, ಅಂದರೆ ಅದು ಅಶುದ್ಧ ವಾದ ಮೃಗದ ಹೆಣವಾಗಲಿ ದನದ ಹೆಣವಾಗಲಿ ಹರಿದಾಡುವವುಗಳ ಹೆಣಗಳಾಗಲಿ ಅವನಿಗೆ ತಿಳಿಯದಿ ದ್ದರೂ ಅವನು ಅಶುದ್ಧನಾಗಿದ್ದು ಅಪರಾಧಿಯಾಗಿರುವನು.
ಯಾವನಾದರೂ ಅಶುದ್ಧನಾಗಿದ್ದು ಕರ್ತ ನಿಗೆ ಸಂಬಂಧಪಟ್ಟ ಸಮಾಧಾನ ಬಲಿಗಳ ಯಜ್ಞದ ಮಾಂಸವನ್ನು ತಿನ್ನುವನೋ ಅವನು ತನ್ನ ಜನರಿಂದ ತೆಗೆಯಲ್ಪಡಬೇಕು.
ಯಾವುದೇ ತರದ ರಕ್ತವನ್ನು ತಿಂದವನು ಯಾವನೇ ಆಗಿರಲಿ ಅವನು ತನ್ನ ಜನರಿಂದ ತೆಗೆದು ಹಾಕಲ್ಪಡಬೇಕು ಎಂಬದೇ.
ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳೆಲ್ಲವೂ ನಿಮಗೆ ಹೇಯವಾಗಿರಬೇಕು.
ಕರ್ತನು ಮೋಶೆಯೊಂದಿಗೆ ಮಾತನಾಡಿ --
ಇದಲ್ಲದೆ ಇಸ್ರಾಯೇಲ್ ಮನೆತನದಲ್ಲಿ ಯಾವನಾದರೂ ನಿಮ್ಮ ಮಧ್ಯದೊಳಗೆ ಪ್ರವಾಸಿಯಾಗಿರುವ ಪರಕೀಯನಾ ದರೂ ಯಾವದೇ ತರದ ರಕ್ತವನ್ನು ತಿಂದರೆ ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
ಯಾವನಾದರೂ ಈ ಅಸಹ್ಯವಾದವುಗಳಲ್ಲಿ ಯಾವ ದನ್ನಾದರೂ ಮಾಡಿದರೆ ಅವುಗಳನ್ನು ಮಾಡುವ ಮನುಷ್ಯರನ್ನು ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
ನಾನು ಆ ಮನುಷ್ಯನಿಗೆ ವಿಮುಖನಾಗಿರುವೆನು; ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು; ಅವನು ನನ್ನ ಹೆಸರನ್ನು ಅಪವಿತ್ರಗೊಳಿಸುವಂತೆ ಮತ್ತು ನನ್ನ ಪವಿತ್ರ ಸ್ಥಳವನ್ನು ಹೊಲೆಮಾಡುವಂತೆ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟಿದ್ದಾನೆ.
ಆರೋನನ ಸಂತತಿಯವರಲ್ಲಿ ಒಬ್ಬನು ಕುಷ್ಠರೋಗಿ ಇಲ್ಲವೆ ಸ್ರಾವವುಳ್ಳವನಿದ್ದರೆ ಅವನು ಶುದ್ಧನಾಗುವ ವರೆಗೆ ಪರಿಶುದ್ಧವಾದವುಗಳನ್ನು ತಿನ್ನಬಾರದು. ಹೆಣದಿಂದ ಅಶುದ್ಧವಾದದ್ದನ್ನು ಮುಟ್ಟಿದವನು ಇಲ್ಲವೆ ತನ್ನೊಳಗಿಂದ ವೀರ್ಯ ಹೊರಟವನು
ಮನುಷ್ಯನ ಹೆಣವನ್ನು ಮುಟ್ಟಿದವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.
ಆದರೆ ಮೆಲುಕು ಹಾಕಿ ಉಗುರುಳ್ಳ ಗೊರಸೆಯನ್ನು ಭೇದಿಸಿಕೊಂಡಿರುವವು ಗಳಲ್ಲಿ ಇವುಗಳನ್ನು ನೀವು ತಿನ್ನಬಾರದು; ಯಾವ ವೆಂದರೆ: ಒಂಟೆ, ಮೊಲ, ಕುಣಿಮೊಲ. ಯಾಕಂದರೆ ಅವು ಮೆಲುಕು ಹಾಕಿದರೂ ಗೊರಸೆಯನ್ನು ಭೇದಿಸು ವದಿಲ್ಲ; ಅವು ನಿಮಗೆ ಅಶುದ್ಧವಾಗಿವೆ.
ಪಕ್ಷಿ ಜಾತಿಯಲ್ಲಿ ನೀವು ತಿನ್ನಬಾರದವುಗಳು ಯಾವ ವೆಂದರೆ: ಗರುಡ, ಬೆಟ್ಟದಹದ್ದು, ಕ್ರೌಂಚ, ಗಿಡಗ, ಹಕ್ಕಿಸಾಲೆ,
ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇ ನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ರಕ್ತದಿಂದ ಕೂಡಿದ ಮಾಂಸವನ್ನು ತಿನ್ನುವರ ಲ್ಲವೇ? ನಿಮ್ಮ ಕಣ್ಣುಗಳು ವಿಗ್ರಹಗಳ ಕಡೆಗೆ ಎತ್ತಿ ರಕ್ತವನ್ನು ಚೆಲ್ಲುವ ನೀವು ದೇಶವನ್ನು ಸ್ವಾಧೀನಪಡಿಸಿ ಕೊಳ್ಳುವಿರೋ?