ಈ ಸ್ಥಳದವರ ಕೂಗು ಕರ್ತನ ಸನ್ನಿಧಿಯಲ್ಲಿ ದೊಡ್ಡದಾಗಿರುವದರಿಂದ ನಾವು ಇದನ್ನು ನಾಶಮಾಡುತ್ತೇವೆ; ಕರ್ತನು ಅದನ್ನು ನಾಶಮಾಡುವದಕ್ಕೆ ನಮ್ಮನ್ನು ಕಳುಹಿಸಿದ್ದಾನೆ ಅಂದರು.
TSK
TSK · ಅರಣ್ಯಕಾಂಡ 16:21
مراجع Treasury of Scripture Knowledge في Kannada KJV.
ಹೀಗಿರುವದರಿಂದ ನನ್ನ ಕೋಪವು ಅವರ ಮೇಲೆ ಉರಿದು ಅವರನ್ನು ದಹಿಸಿ ಬಿಡುವಂತೆ ನನ್ನನ್ನು ಬಿಡು. ತರುವಾಯ ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನು ಅಂದನು.
ನಾನು ಅವರನ್ನು ವ್ಯಾಧಿಯಿಂದ ಹೊಡೆದು ನಿರ್ಮೂಲಮಾಡಿ ನಿನ್ನನ್ನು ಅವರಿಗಿಂತ ದೊಡ್ಡದಾದ ಬಲವುಳ್ಳ ಜನಾಂಗವನ್ನಾಗಿ ಮಾಡುವೆನು ಅಂದನು.
ನೀವು ಈ ಸಭೆಯ ಮಧ್ಯದಿಂದ ಎದ್ದು ಬನ್ನಿರಿ. ನಾನು ಅವರನ್ನು ಕ್ಷಣಮಾತ್ರದಲ್ಲಿ ದಹಿಸಿಬಿಡುತ್ತೇನೆ ಅಂದನು. ಆಗ ಅವರು ಬೋರಲು ಬಿದ್ದರು.
ಕ್ಷಣಮಾತ್ರದಲ್ಲಿ ಹೀಗೆ ನಾಶನಕ್ಕೆ ಅವರನ್ನು ಬರಮಾಡಿದಿ. ಅವರು ದಿಗಿಲುಗಳಿಂದ ಸಂಪೂರ್ಣವಾಗಿ ನಾಶವಾಗಿದ್ದಾರೆ.
ಅವರ ಬತ್ತಳಿಕೆ ತೆರೆದ ಸಮಾಧಿಯ ಹಾಗಿದೆ; ಅವರೆಲ್ಲರೂ ಪರಾಕ್ರಮ ಶಾಲಿಗಳೇ.
ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.
ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು ಪಡೆಯುವವರಾದ ನಾವು ವಿನಯದಿಂದಲೂ ದೇವರ ಭಯದಿಂದಲೂ ದೇವರನ್ನು ಯೋಗ್ಯವಾಗಿ ಸೇವಿಸು ವಂತೆ ಕೃಪೆಯನ್ನು ಹೊಂದಿಕೊಳ್ಳೋಣ.